ಬಿಸಿ ಬಿಸಿ ಸುದ್ದಿ ಕೃಷಿ ಪಂಡಿತರು ಸರ್ಕಾರಿ ಯೋಜನೆಗಳು ಸಾಧಕರ ಹೆಜ್ಜೆ ಗುರುತು ನಮ್ಮೂರ ಸೊಬಗು

Lokayukta trap | ಪೋಲಿಸರೇ ಅರೆಸ್ಟ್ !

Published on: Thursday, September 3, 2026 2:56 PM
Last Updated on: Thursday, September 3, 2026 2:56 PM
Lokayukta trap | ಪೋಲಿಸರೇ ಅರೆಸ್ಟ್ !

ಕಲಬುರಗಿ : Lokayukta trap | ಪೋಲಿಸರೇ ಅರೆಸ್ಟ್ ! ಕಾನೂನು ಕಾಪಾಡಬೇಕಾದ ಪೊಲೀಸರೇ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದ ಘಟನೆ ಗೃಹ ಸಚಿವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ನಡೆದಿದೆ.

ಕಲಬುರ್ಗಿಯ ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗಳಾದ ಪರಶುರಾಮ್ ಮತ್ತು ವಿರೇಶ ಲೋಕಾಯುಕ್ತ ಬಲೆಗೆ ಬಿದ್ದವರು.

ಈ ಇಬ್ಬರು ಕಾನ್ಸ್ಟೇಬಲ್ ಗಳು ಕಲ್ಬುರ್ಗಿಯಲ್ಲಿ ವಿಶೇಷವಾಗಿ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳನ್ನು ಗಡಿಪಾರು ಮಾಡುವುದಾಗಿ ಹೆದರಿಸುತ್ತಿದ್ದರು. ಲಂಚ ಕೊಟ್ಟರೆ ಗಡಿ ಪಾರಾಗುವವರ ಪಟ್ಟಿಯಿಂದ ನಿಮ್ಮ ಹೆಸರು ಕೈ ಬಿಡಿಸುವುದಾಗಿ ಹೇಳುತ್ತಿದ್ದರು.

Lokayukta trap | ಪೋಲಿಸರೇ ಅರೆಸ್ಟ್ !

ಅದೇ ರೀತಿ ಕಲ್ಬುರ್ಗಿಯ ರೌಡಿಶೀಟರ್ ಖನ್ನಾ ಪಟೇಲ್ ಎನ್ನುವಾತನಿಗೂ ಹೆದರಿಸಿ ಐವತ್ತು ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದರು. ಅಲ್ಲದೆ ಮತ್ತೆ 20 ಸಾವಿರ ರೂಪಾಯಿ ಕೊಡು ಎಂದು ಪೀಡಿಸುತ್ತಿದ್ದರು. ಇವರ ಕಾಟದಿಂದ ಕಂಗೆಟ್ಟ, ರೌಡಿಶೀಟರ್ ಖನ್ನಾ ಪಾಟೀಲ್, ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದ.

Read this also : ಟಂಟಂ ಲಾರಿ ಡಿಕ್ಕಿ ತಾಯಿ ಮಗು ಸಾವು

ಇತ್ತ ಮತ್ತೆ 20,000 ಹಣಕ್ಕಾಗಿ ಪೀಡಿಸುತ್ತಿದ್ದ ಪರಶುರಾಮ್ ಮತ್ತು ವಿರೇಶ ಅವರಿಗೆ, ರೌಡಿಶೀಟರ್ ಖನ್ನಾ ಪಟೇಲ್ ಇಂದು ಹಣ ಕೊಡಲು ಬ್ರಹ್ಮಪುರ ಪೊಲೀಸ್ ಠಾಣೆಗೆ ಬಂದಿದ್ದ. ಈ ಮೊದಲೇ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಕಾರಣ, ಇದೇ ವೇಳೆ ಲೋಕಾಯುಕ್ತರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್ಸ್ಟೇಬಲ್

ಪರಿಣಾಮ ತಾವು ಕೆಲಸ ನಿರ್ವಹಿಸುವ ಬ್ರಹ್ಮಪುರ ಪೊಲೀಸ್ ಠಾಣಾ ಕಾಂಪೌಂಡಿನಲ್ಲಿಯೇ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಕಾನ್ಸ್ಟೇಬಲ್ ಗಳಾದ ಪರಶುರಾಮ್ ಮತ್ತು ವಿರೇಶ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ತಾವು ಲಂಚ ಪಡೆಯುವಾಗ ಲೋಕಾಯುಕ್ತರು ಟ್ರ್ಯಾಪ್ ಮಾಡಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಕಾನ್ಸ್ಟೇಬಲ್ ವಿರೇಶ‌ ಲೋಕಾಯುಕ್ತರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಇನ್ನು ಕಾನ್ಸ್ಟೇಬಲ್ ಪರಶುರಾಮನನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಓಡಿ ಹೋಗಿರುವ ಇನ್ನೊಬ್ಬ ಲಂಚ ಬಾಕ ಕಾನ್ಸ್ಟೇಬಲ್ ವಿರೇಶ ಪತ್ತೆಗೆ ಲೋಕಾಯುಕ್ತ ಪೊಲೀಸರು ಜಾಲ ಬೀಸಿದ್ದಾರೆ. ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಈ ಲೋಕಾಯುಕ್ತ ಕಾರ್ಯಾಚರಣೆ ನಡೆದಿದೆ.

Join WhatsApp

Join Now

Join Telegram

Join Now